ಅಮ್ಮ
ಅಮ್ಮ ಎಂದರೆ ನೆನಪಾಗುವದು ಮಮತೆ, ಪ್ರೀತಿ ......ಹಾಗೆ ಅದರ ಜೊತೆ ನೆನಪಾಗೋದು ಲಕ್ಕಿ ಬರಲಿನ ಏಟು...:)
ಚಿಕ್ಕವನಿದ್ದಾಗ ನಾನು ಮಾಡುತ್ತಿದ್ದ ಕಪಿ ಚೇಷ್ಟೆಗಳನ್ನು ಹೇಳಿದರೆ ಯಾರೂ ನಂಬಲ್ಲ ;)
ಎಷ್ಟೇ ಕಿಲಾಡಿ ಮಾಡಿದರು ನಂ ಅಮ್ಮ ಸಹನೆಯಿಂದ ಸಂಬಾಳಿಸುತ್ತಿದ್ದರು.
ಅಮ್ಮ ಬೀಸುಕಲ್ಲಿನಲ್ಲಿ ದೋಸೆ ಹಿಟ್ಟು ಬೀಸುತ್ತ, ನನಗೆ ಕಥೆ ಹೇಳಿ ಓಲೈಸಿ ಓದಿಸಿರದಿದ್ದರೆ ಇಂದು ನಾನು
ಬಿ.ಇ ನೂ ಮಾಡುತ್ತಿರಲಿಲ್ಲ ....ಎಂ.ಬಿ.ಎ ನೂ ಮುಗಿಸುತ್ತ ಇರಲಿಲ್ಲ ...
ಇವತ್ತು ನಾನು ಬೆಂಗಳೂರಿನ ಪ್ರತಿಷ್ಟಿತ ಕಂಪನಿ ಒಂದರಲ್ಲಿ ಹಿರಿಯ ಅಭಿಯಂತರ .....
ಇವತ್ತು ನಾನು ಇಲ್ಲಿತನಕ ಬೆಳೆದಿದ್ದಿದ್ದರೆ ಅದರ ಸಿಂಹ ಪಾಲು ಅಮ್ಮನಿಗೆ ಸೇರುತ್ತದೆ.
ನಾನು ಕನ್ನಡ ಶಾಲೆಗೆ ಹೋಗುವ ಸಮಯದಲ್ಲಿ ಅಮ್ಮ ಬೆಳಿಗ್ಗೆ ೫ ಗಂಟೆಗೆ ಎಬ್ಬಿಸುತ್ತಿದ್ದರು. ನಾನು ಓದಲು ಕುಳಿತು
ಹಾಗೆ ತೂಕಡಿಸುತ್ತಿದ್ದೆ. ಎಷ್ಟೋ ದಿನ ಅಮ್ಮ ಬೆಳಿಗ್ಗೆ ನನ್ನ ಎಬ್ಬಿಸಿ, ನೀರು ಕಾಯಿಸಲು ಬೆಂಕಿ ಹೊತ್ತಿಸಿ, ನನ್ನೊಂದಿಗೆ ಕೂತು ಓದಿಸುತ್ತಿದ್ದರು.
ಶಾಲೆಯಲ್ಲಿ ಎಲ್ಲರ ಜೊತೆ ಹೇಗಿರಬೇಕು, ಸಮಾಜದಲ್ಲಿ ನಡುವಳಿಕೆ ಹೇಗಿರಬೇಕು ಅನ್ನುವದನ್ನು ಕಲಿಸಿದ ಗುರು ನನ್ನ ಅಮ್ಮ.
ಅಂದು ನಾನು ರಾಂಕ್ ಬಂದಾಗ ತಾವೇ ರಾಂಕ್ ಬಂದಂತೆ ಖುಷಿಪತ್ತಿದ್ದ ಅಮ್ಮ, ನಾನು ಬಿದ್ದಾಗ, ನನಗೆ ನೋವಾದಾಗ, ಅವರೂ ಅತ್ತಿದ್ದರು.
ಇಂದು ನಾನು ದೊಡ್ಡವನಾದರೂ ನಮ್ಮ ಅಮ್ಮ ಹಾಗೆ ಇದ್ದಾರೆ. ಅವರಿಗೆ ನಾನು ಚಿಕ್ಕ ಮಗುವೆ. ಈಗಲೂ ನನಗೆ ಹುಷಾರು ತಪ್ಪಿದರೆ,
ರಾತ್ರಿ ಎಲ್ಲ ಎದ್ದಿದ್ದು ಆರೈಕೆ ಮಾಡುತ್ತಾರೆ. ನನಗೆ ಒಳ್ಳೆದಾಗಲಿ ಎಂದು ಎಷ್ಟೋ ದೇವರಿಗೆ ಹರಕೆ ಹೊತ್ತುಕೊಳ್ಳುತ್ತಾರೆ.
ನಾನು ಬೇಡ ಎಂದರೂ ಪ್ರತೀದಿನ ನನಗೆ ಕರವಸ್ತ್ರ, ಅಂಗಿ ಪ್ಯಾಂಟ್ ತನಕ ರೆಡಿ ಇಟ್ಟಿರುತ್ತಾರೆ.
ದಿನಾಲು ನಾನು ಹೊರಟಾಗ ನಿದಾನವಾಗಿ ಹುಷಾರಾಗಿ ಹೋಗು ಎಂದು ರಸ್ತೆಯ ತನಕ ಬಂದು ಕಳುಹಿಸಿಕೊಡುತ್ತಾರೆ.
ಇಂದಿಗೂ ನಾನು ಏನಾದರು ಆಟ ಆಡಿ ಬಂದರೆ, ಹೊರಗೆ ತಿರುಗಿ ಬಂದರೆ: ನಾನು ಮಲಗಿದ ನಂತರ ನನಗೆ ಗೊತ್ತಿಲ್ಲದಂತೆ
ನನ್ನ ಕಾಲಿಗೆ ಎಣ್ಣೆ ಸವ್ರುತ್ತಾರೆ.
ಹೇಗೆ ಅಮ್ಮ ಅಷ್ಟೊಂದು ದೊಡ್ಡ ಮತ್ತು ಮೃದು ಹೃದಯಿ ಎಂದು ಇಂದಿನ ತನಕ ನನಗೆ ತಿಳಿಯಲು ಸಾಧ್ಯವಾಗಿಲ್ಲ.
ನನಗೆ ಅಮ್ಮ ಅದು ಮಾಡಿದ್ದೇನೆ ತಿನ್ನು ಇದು ಮಾಡಿದ್ದೇನೆ ತಿನ್ನು ಅಂದಾಗ ಎಷ್ಟೋ ಸಲ ನಾನು ರೆಗಿದ್ದೇನೆ. ಆದರೆ ನನ್ನ ಅಮ್ಮ ಸಿಟ್ಟಗಿದ್ದನ್ನು ನೋಡಿಯೇ ಇಲ್ಲ.
ನಾನು ಎಲ್ಲಾದರೂ ಕಾರ್ಯ ಕ್ಕೆ ಹೋಗಿಬಂದರೆ, ಅಮ್ಮ, ನಿನಗೆ ದೃಷ್ಟಿ ಆಗಿದೆನೋಡು ಅಂತ ದೃಷ್ಟಿ ತೆಗೆಯುವದು ಗ್ಯಾರಂಟೀ.
ಪ್ರತೀದಿನ ನಾನು ಕೆಲಸಕ್ಕೆ ಹೊರಟಾಗ ದೇವರ ಮುಂದೆ ದೀಪ ರೆಡಿ ಇಟ್ಟಿದ್ದೇನೆ ಬೆಳಗಿಸಿ ಹೋಗು ಅನ್ನದಿದ್ದರೆ ಅವರಿಗೆ ಸಮಾದಾನವೇ ಇಲ್ಲ.
ಹೀಗೆ ಹೇಳುತ್ತಾ ಹೋದರೆ ಕೊನೆಯಿಲ್ಲದಷ್ಟು ಮಮತೆ ಪ್ರೀತಿಯನ್ನು ನೀಡುತ್ತಿದ್ದಾರೆ ಅಮ್ಮ.
ನಾನೆಷ್ಟೇ ದೊಡ್ಡವನಾದರೂ, ನಿನ್ನ ಕೈ ತುತ್ತಿನಲ್ಲಿರುವ ರುಚಿ, ನಿನ್ನ ತೊಡೆಯಲ್ಲಿ ಮಲಗಿದಾಗ ಸಿಗುವ ನಾನು ಭದ್ರ ಎಂಬ ಭಾವನೆ,
ನೀನು ನೆರೆದಿರುವ ನನ್ನ ತಲೆ ಗೆ ಪ್ರೀತಿಯಿಂದ ಹಾಕುವ ಎಣ್ಣೆ, ಬಳಲಿ ಬಂದಿರುವಾಗ ನೀನು ಕೇಳದೆಯೇ ತಂದು ಕೊಡುವ ಮಜ್ಜಿಗೆ,
ನಿನ್ನ ಅರೋಗ್ಯ ಸರಿ ಇಲ್ಲದಿದ್ದರೂ ನೀನು ಒತ್ತಾಯದಿಂದ ಮಾಡಿ ಬಡಿಸುವ ನನ್ನಿಷ್ಟದ ಅಡುಗೆ, ನಾನು ಹೊಸ ಬಟ್ಟೆ ತೊಟ್ಟಾಗ ನಿನ್ನ ಕಣ್ಣು ತೋರುವ ಸಂಭ್ರಮ,,,, ಅಮ್ಮಾ ಇದೆಲ್ಲದರ ಋಣ ತೀರಿಸಲು ಈ ಜನ್ಮ ಸಾಲದು ಅಮ್ಮಾ.
ಅದಕ್ಕೆ ತಾನೇ ದೊಡ್ಡವರು ಹೇಳಿರುವದು ತಾಯಿಯ ಪ್ರೀತಿಯ ಮುಂದೆ ಹಿಮಾಲಯವೂ ಹಿಂದೆ ಅಂತ.
ನನ್ನಿಂದ ಇಷ್ಟನ್ನೇ ಹೇಳಲು ಸಾಧ್ಯ, ಅಮ್ಮಾ ಇ ಲವ್ ಯು.
Friday, July 16, 2010
Subscribe to:
Post Comments (Atom)
very nice words MP.
ReplyDeletethanks boss
ReplyDeleteultimate article MP... correction madiddu chennagi bandide...
ReplyDeleteheege matte bariyiri...
Too good MP, Really nice thoughts which gives sweet n sweet memories back.
ReplyDeleteThanks a lot for mind refreshing article
Happy to say "Amma I love u"
thanks.. Manju n Prakash
ReplyDelete