Sunday, September 20, 2009

ಜೀವ ನೋವ...

ನೀ ಬಡಿದೆಬ್ಬಿಸಿದೆ ನನ್ನೆದೆಯ ಭಾವ,
ತುಂಬಿದೆ ಒಲುಮೆಯ ಜೀವ,
ಬೇಯಿಸದಿರು ನನ್ನ ಮನವ ಗೆಳತಿ,
ಕನ್ಪರದೆ ತೋರುವದು ಮನದ ನೋವ!!!

Thursday, September 3, 2009

ಯಾರೇ ನೀ ?

ನೀಲ ಗಗನದಲಿ ನಲ್ಮೆಯ ಮೇಘ,
ನಲ್ಮೆಯ ಮೇಘ ತೇಲಾಡಿ ಚಿತ್ರಿಸಿದ,
ಚಿತ್ರಿಸಿದ ತುಂತುರು ಹನಿಗಳ ಮಾಲೆ,
ಹನಿಗಳ ಮಾಲೆ ನೆನೆಸುತಿದೆ ನನ್ನೆದೆಯ,
ನನ್ನೆದೆಯ ನೀರೆ, ನೀನ್ಯಾರೆ ?

ನಿಜ - ಭ್ರಮೆ

ನೀ ಚೆಲುವಿನ ಖನಿಯೋ,
ಸೌಂದರ್ಯದ ಗಣಿಯೋ...?
ಅಥವಾ ನನ್ನ ಕಣ್ಣಿನ ಪರದೆಯ
ಆವರಿಸಿದ ಮಧು ಮಾಸದ
ರೂಪಕ ಮೂಡಿಸಿದ ಭ್ರಮೆಯೋ !!!

ಆಸೆ - ಜಿಜ್ಞಾಸೆ

ನಿನ್ನ ಒಲವಿನ ಸಾಂಗತ್ಯದ ಆಸೆ,
ಆಸೆ ತಂದಿತು ಈ ಜಿಜ್ಞಾಸೆ,
ಇದು ಸೊಬಗಿನ ಅರಮನೆಯೇ
ಅರಮನೆಯೇ, ಪ್ರೇಮದ ಸೆರೆಮನೆಯೆ?