ಅಪ್ಪಯ್ಯ, ನಿನ್ನ ನೆನಪು ಕಾಡದೆ ಇರದು
ಮಕ್ಕಳನ್ನು ಬೆಳೆಸುವಲ್ಲಿ ಅಪ್ಪನ ಪಾತ್ರ ತುಂಬಾ ದೊಡ್ಡದು. ಅದರಲ್ಲೂ ಅವಿಭಕ್ತ ಕುಟುಂಬದಲ್ಲಿ ಹತ್ತಾರು ಮಕ್ಕಳನ್ನು ಬೆಳೆಸುವದು, ಓದಿಸುವದು ಎಂದರೆ ಕಥಿಣವೇ ಸರಿ.
ನನ್ನ ನೆನಪಿನ ಬುಟ್ಟಿಯಲ್ಲಿ ಅಳಿಯದೆ ಉಳಿದ ಅಪ್ಪಯ್ಯನ ಚಿತ್ರಪಟವನ್ನು ಬಿಚ್ಚುವ ಪ್ರಯತ್ನ ಇದು.
ನಾನು ಸುಮಾರು ೪-೫ ವರ್ಷದವನಿದ್ದಾಗ ಒಂದು ದಿನ ಯಾರೋ ಅತಿಥಿ ನಮ್ಮ ಮನೆಗೆ ಬಂದಿದ್ದರು. ಅವರಿಗೆಂದು ಇಟ್ಟಿದ್ದ ತಿಂಡಿಯನ್ನು ನಾನು ತೆಗೆದು ಕೊಂದು ಓಡಿದಾಗ
ಅಪ್ಪಯ್ಯ ಕೊಟ್ಟ ಏಟು ಇನ್ನು ನೆನಪಿದೆ. ಏಟಿನ ಜೊತೆ ಮನೆಗೆ ಬಂದ ಅತಿಥಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಪಾಠವೂ ಮರೆಯದೆ ಉಳಿದಿದೆ. ಇದೆ ರೀತಿಯ ಹತ್ತು ಹಲವು ಸಂಸ್ಕಾರಗಳನ್ನು
ಕಲಿಸಿದ, ಅದನ್ನು ಪಾಲಿಸುವಂತೆ ಪ್ರೇರೇಪಿಸಿದ ಅಪ್ಪಯ್ಯನ ಕಲಾತ್ಮಕತೆಗೆ ಅವರೇ ಸಾಟಿ.
ನಾನು ೫ನೆ ತರಗತಿಯಲ್ಲಿರುವಾಗಿನ ಒಂದು ದಿನ: ನನಗೆ ಪವರ್ ಕ್ರಿಕೆಟ್ ಬ್ಯಾಟ್ ಬೇಕೆಂದು ಕೇಳಿದೆ. ಅದರ ಬೆಲೆ ೧೯೯೩ರಲ್ಲೆ ೮೦೦roo ಇತ್ತು.
ಕೂಡು ಕುಟುಂಬದಲ್ಲಿ ಅಷ್ಟು ದುಬಾರಿ ವಸ್ತುವನ್ನು ಕೇವಲ ಆಟಕ್ಕಾಗಿ ತರುವದು ಇರಿಸುಮುರುಸು ತರುವ ಸಂಗತಿ ಆಗಿತ್ತು.
ಆದರೂ ಕೂಡ ಅವರು ಎರಡನೇ ವಿಚಾರ ಮಾಡದೆ ಅದೇ ದಿನ ನನ್ನ ನೆಚ್ಚಿನ ಬಟನ್ನು ತಂದು ಕೊಟ್ಟಿದ್ದು ಇನ್ನು ಮಾಸದೆ ಕಣ್ಣಿನ ಮುಂದೆ ಇದೆ.
ನಂತರ ಅದೇ ಬ್ಯಾಟ್ ನಿಂದ ಹಲವಾರು ಟೂರ್ನಿ ಗಳನ್ನೂ ಆಡಿ ಗೆದ್ದು ಬಂದ ಟ್ರೋಫಿ ಗಳನ್ನೂ ನೋಡಿ ಅವರು ಖುಷಿ ಪಟ್ಟಿದ್ದು ಹೆಮ್ಮೆಯ ಸಂಗತಿ.
ನಾನು ೬ನೆ ವರ್ಗದಲ್ಲಿದ್ದಾಗ ಒಂದು ದಿನ: ನಮ್ಮ ಮನೆಯ ಎಮ್ಮೆಗೆ ಕಾಯಿಲೆ ಬಂದಿತ್ತು. ತತ್ಕ್ಷಣ ಜಾನುವಾರು ವೈದ್ಯರನ್ನು ಕರೆತರಬೇಕು. ಜೀಪ್ ಓಡಿಸಲು ಅಣ್ಣ ಮನೆಯಲ್ಲಿರಲಿಲ್ಲ.
ಆಗ ಅಪ್ಪಯ್ಯ ನನ್ನನ್ನು ಕರೆದು, ನೀನು ಜೀಪ್ ಓಡಿಸು ನಾನು ಹೇಳಿಕೊಡುತ್ತೇನೆ ಎಂದು ಕಳಿಸಿ ಕರೆದೊಯ್ದರು. ನಾನು ವಾಹನ ಓಡಿಸಿದ ಪ್ರಥಮ ದಿನವೇ 5km ದೂರದ ಹಾರ್ಸಿಕತ್ತ ತನಕ
ಅಪ್ಪಯ್ಯನ ಮಾರ್ಗದರ್ಶನದಲ್ಲಿ ಜೀಪ್ ಓಡಿಸಿದೆ. ಸ್ವತಹ ಅವರು ಓಡಿಸದಿದ್ದರೂ, ಎಲ್ಲವನ್ನು ಬಲ್ಲವರಾಗಿದ್ದ ಅವರು ನನ್ನ ಬೆನ್ನು ತಟ್ಟಿದ ರೀತಿ ಯಾರು ಮೆಚ್ಚುವಂತದ್ದು.
ನಮ್ಮ ಯಾವುದೇ ಸಂಭಂದಿಕರ ಮನೆಯಲ್ಲಿ ವಿಶೇಷ ಕಾರ್ಯಕ್ರಮವಿದ್ದರೂ ಅಪ್ಪಯ್ಯ ಅಲ್ಲಿರಲೇ ಬೇಕು. ಅಲ್ಲಿಯನ್ ಆಗು ಹೋಗುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದ
ಅವರ ನಾಯಕತ್ವದ ಗುಣಕ್ಕೆ ಮಾರುಹೋಗದವರಿಲ್ಲ. ಅವರು ನಮ್ಮನ್ನಗಲಿ ೪ ವರ್ಷ ಕಳೆದರೂ, ಇವತ್ತಿಗೂ ಸಹ ನಮ್ಮ ವಲಯದಲ್ಲಿ ಕಾರ್ಯ ಆದರೆ ಅವರನ್ನು ನೆನಪಿಸಿಕೊಳ್ಳುವದೇ ಅವರ ಜವಾಬ್ದಾರಿಯುತ ನಿರ್ವಹಣೆಗೆ ಸಾಕ್ಷಿ.
ಕೂದುಕುಟುಮ್ಬದ ವ್ಯವಹಾರಗಳನ್ನು ನೋಡಿಕೊಂಡು, ಒಟ್ಟೂ ೮ ಹೆಣ್ಣುಮಕ್ಕಳ ಮದುವೆ ಕಾರ್ಯ ಮಾಡಿ, ಬರೋಬರಿ ೧೨ ಎಕರೆ ತೋಟವನ್ನು ನೋಡಿಕೊಂಡು ಬಂದ ಅವರ ಚಾನಕ್ಷತೆಗೆ ಹಾಟ್ಸ್ ಓಫ್ಫ್.
ನಮ್ಮ ಊರಿನಲ್ಲಿ ಮೊದಲು ಇಂಗ್ಲಿಷ್ ಕಲಿತವರಾಗಿದ್ದ ಅಪ್ಪಯ್ಯ ನಿಗೆ ಊರವರೆಲ್ಲ ಪ್ರೀತಿಯಿಂದ ಪಿ ಎಂ ಹೆಗಡೆ ಎಂದೇ ಕರೆಯುತ್ತಿದ್ದರು. ಹಿಂದಿ ಕೊಂಕಣಿ ಸಹ ಬಲ್ಲವರಾಗಿದ್ದ ಅವರು ಒಬ್ಬ ಬಹು ಪ್ರತಿಭೆ ಉಳ್ಳ ಸಜ್ಜನರಾಗಿದ್ದರು.
ನನ್ನ ಅಜ್ಜ ದುಡ್ಡಿನ ತೊಂದರೆಯಿಂದ ಚಿಕ್ಕಪ್ಪರಿಬ್ಬರಿಗೆ ಓದನ್ನು ನಿಲ್ಲಿಸಲು ಹೇಳಿದಾಗ, ಅಪ್ಪಯ್ಯ ನೆ ಅಜ್ಜನಿಗೆ ತಿಳಿಹೇಳಿ, ಚಿಕ್ಕಪ್ಪನ್ದಿರಿಗೆ ಮುಂದೆ ಓಡಿಸಿದ್ದು ಈಗ ಹಳೆ ಕಥೆ.
ಈ ಇಬ್ಬರು ಚಿಕ್ಕಪ್ಪಂದಿರು ಇಂದು ಜನ ಹುಬ್ಬೇರಿಸುವಂತೆ ಬೆಳೆದಿದ್ದಾರೆ.
ಮನೆಯಲ್ಲಿ ಎಷ್ಟೇ ಸವಲತ್ತಿದ್ದರೂ ಸಾರ್ವಜನಿಕ ಸಾರಿಗೆಯನ್ನು ಬಹುತೇಕ ಬಳಸುತ್ತಿದ್ದ ಅವರ ಆದರ್ಶ ಎಂದಿಗೂ ಪಾಲನಾರ್ಹ.
ಮಳೆಗಾಲದಲ್ಲಿ ಅಪ್ಪಯ್ಯ ನೀನು ಹೊತ್ತು ತರುತ್ತಿದ್ದ ಕಳಲೆ ಹೊರೆ, ಮದುವೆ ಹಿಂದಿನ ದಿನ ನೀನು ಚಪ್ಪರ ಹಾಕಿಸುತ್ತಿದ್ದ ಆ ಪ್ಲಾನು, ರೀತಿ, ಯಾವುದೇ ಪಟ್ಟಿ ಇಲ್ಲದೆ ನೀನು ನೆನಪಿಟ್ಟು ತರುತ್ತಿದ್ದ ೩೦-೪೦ ಸಾವಿರ ಬಾಳುವ ಸಾಮಾನುಗಳು, ಮಕ್ಕಳಿಗೆ ಪ್ರೀತಿ, ಭಯ ಎರಡನ್ನು ಇಡುತ್ತಿದ್ದ ನಿನ್ನ ಕೈಚಳಕ, ಯಾವುದೇ ಸಭೆಯಲ್ಲಿ ನೀನು ಭಾಷಣ ಮಾಡುತ್ತಿದ್ದ ಪರಿ
ವ್ಯವಹಾರ ಮಾಡಿದ ಎಲ್ಲಕಡೆ ನೀನು ಗಳಿಸಿದ ಗೌರವ ಪ್ರೀತಿ, ಒಡಹುಟ್ಟಿದವರು ಕಷ್ಟದಲ್ಲಿದ್ದಾಗ ನೀನು ಸ್ಪಂದಿಸಿದ ನೀತಿ,,,,,, ಅಪ್ಪಯ್ಯಾ ನಿಂಗೆ ನೀನೆ ಸಾಟಿ. ನಿನ್ನ ಜಾಗವನ್ನು ತುಂಬಲು ಯಾರಿಂದಲೂ ಸಾದ್ಯವಿಲ್ಲ..... ಅಪ್ಪಯ್ಯ, ನಿನ್ನ ನೆನಪು ಕಾಡದೆ ಇರದು,,,,,:( :(
ನಿನ್ನದೇ ದಾರಿಯಲ್ಲಿ ಸಾಗುವ ಯತ್ನದಲ್ಲಿ,
ನಾವು.
Thursday, July 15, 2010
Subscribe to:
Post Comments (Atom)
This comment has been removed by the author.
ReplyDeleteSincere apologies for not writing in kannada.
ReplyDeleteAmazing words...truly inspirational:) i never knew that i have a friend who is multi talented who can write so touching and emotional things about his father.
In fact when i was reading your blog it made me go back to those days how you might have felt when you got beatings from ur dad and of course the way he might have felt when you came back home winning those trophies.. amazing MP.I'm adding this link to my favorites, hope to see some more blogs soon.
You gonna reach long way!!
thanks a lot Raja.
ReplyDelete