ಗೌಪ್ಯಂತರಂಗದಿ ಹುಡುಕಿ
ತಡಕಿ ಕಾರಣ !!?
ಮೌನ ಮನದಿ ಆಯಿತೆಂದು
ಪನ್ನೀರ ಸಿಂಚನ ?
ಅರಿಯದಂತೆ ಅಡಿಯನಿಟ್ಟೆ
ಯಾವುದು ಈ ತಾಣ ?
ತಿಳಿಯದಂತೆ ಕೊಟ್ಟೆ ಎದೆಯ
ಬಿತ್ತು ಪ್ರೇಮ ಬಾಣ ->
ದಿನವು ಕಳೆಯೆ, ಒಲವು ಚಿಗುರಿ
ಆದ ಬಣ್ಣ ತೋರಣ
ಶಬ್ದವಿಲ್ಲ ಬಣ್ಣಿಸೆನೆ, ಈ ಶುದ್ಧ
ಶುಭ್ರ ಪ್ರೀತಿ ಹೂರಣ !!
Friday, December 17, 2010
Tuesday, December 7, 2010
ಚಿತ್ತ ಚಿತ್ರ
ಪ್ರೆಮದಂಚು ತುಡುಕಿ ಮೈಮನ,
ಆ ಸೆಳೆತ ತಂದ ಮಧುರ ಕಂಪನ,
ಆ ಸೆಳೆತ ತಂದ ಮಧುರ ಕಂಪನ,
ನೆನಪ ಬುಟ್ಟಿ ತುಂಬಿತೀದಿನ,
ಅರಿತೆ ನಾನು ಸತ್ಯ ಒಂದನಾ
ಅರಿತೆ ನಾನು ಸತ್ಯ ಒಂದನಾ
ಈ ಪ್ರೀತಿ ಚಿತ್ರ ನಿತ್ಯ ನೂತನ !!!
Wednesday, September 29, 2010
ಪ್ರೀತಿ - ಬೆಳಕು
ಸುತ್ತಲೂ ಬೀರಿದ ತಿಂಗಳಬೆಳಕೆ,
ಶರದ ಋತು ಪೌರ್ಣಿಮೆಯುದಯ
ಪೂರ್ಣ ಚಂದಿರನೆ?
ಮನದ ಕೌತುಕ ದೊಡತಿ
ಹೃದಯ ಚಂದಿರೆಯೇ??
Wednesday, August 18, 2010
ಕಥೆ-ವ್ಯಥೆ -- ನೋಡಿ - ತಿಳಿ
ಎಲ್ಲ ಬಯಸುವರು ನನ್ನೀ,
ಅಂದ, ಚೆಂದ, ಸವಿ ಗಂಧ
ಎಲ್ಲ ಹೀರುವರು ನನ್ನೀ,
ಅಧರ ಮಧುರ ಮಕರಂದ,
ಅಂದ, ಚೆಂದ, ಸವಿ ಗಂಧ
ಎಲ್ಲ ಹೀರುವರು ನನ್ನೀ,
ಅಧರ ಮಧುರ ಮಕರಂದ,
ಈ ಮಧ್ಯೆ ಕೇಳುವವರ್ಯಾರು,
ನನ್ನಂತರಂಗದ ನೋವಿನ ಕಥೆ,
ಇಲ್ಲಿ ಸ್ಪಂದಿಸುವವರ್ಯಾರು,
ತಿಳಿದು ಬಾಳ ಹಿಮ್ಮುಖದ ವ್ಯಥೆ,
ಮನದ ನೋವಿಗೆ ಮೊಗವಲ್ಲ ಕನ್ನಡಿ,
ಬಾಳ ವ್ಯಥೆಗೆ ರಸಹೀನತೆ ಮುನ್ನುಡಿ,
ದುಂಬಿಗಳ ದಾಳಿ, ಬಿರುಗಾಳಿ ಹಾವಳಿ
ನನ್ನಂತೆ ನೋವುಂಡು, ಸರ್ವರಿಗೂ
ಸುಖ ನೀಡುವದ ನೀ ತಿಳಿ
Friday, July 16, 2010
ಅಮ್ಮ
ಅಮ್ಮ
ಅಮ್ಮ ಎಂದರೆ ನೆನಪಾಗುವದು ಮಮತೆ, ಪ್ರೀತಿ ......ಹಾಗೆ ಅದರ ಜೊತೆ ನೆನಪಾಗೋದು ಲಕ್ಕಿ ಬರಲಿನ ಏಟು...:)
ಚಿಕ್ಕವನಿದ್ದಾಗ ನಾನು ಮಾಡುತ್ತಿದ್ದ ಕಪಿ ಚೇಷ್ಟೆಗಳನ್ನು ಹೇಳಿದರೆ ಯಾರೂ ನಂಬಲ್ಲ ;)
ಎಷ್ಟೇ ಕಿಲಾಡಿ ಮಾಡಿದರು ನಂ ಅಮ್ಮ ಸಹನೆಯಿಂದ ಸಂಬಾಳಿಸುತ್ತಿದ್ದರು.
ಅಮ್ಮ ಬೀಸುಕಲ್ಲಿನಲ್ಲಿ ದೋಸೆ ಹಿಟ್ಟು ಬೀಸುತ್ತ, ನನಗೆ ಕಥೆ ಹೇಳಿ ಓಲೈಸಿ ಓದಿಸಿರದಿದ್ದರೆ ಇಂದು ನಾನು
ಬಿ.ಇ ನೂ ಮಾಡುತ್ತಿರಲಿಲ್ಲ ....ಎಂ.ಬಿ.ಎ ನೂ ಮುಗಿಸುತ್ತ ಇರಲಿಲ್ಲ ...
ಇವತ್ತು ನಾನು ಬೆಂಗಳೂರಿನ ಪ್ರತಿಷ್ಟಿತ ಕಂಪನಿ ಒಂದರಲ್ಲಿ ಹಿರಿಯ ಅಭಿಯಂತರ .....
ಇವತ್ತು ನಾನು ಇಲ್ಲಿತನಕ ಬೆಳೆದಿದ್ದಿದ್ದರೆ ಅದರ ಸಿಂಹ ಪಾಲು ಅಮ್ಮನಿಗೆ ಸೇರುತ್ತದೆ.
ನಾನು ಕನ್ನಡ ಶಾಲೆಗೆ ಹೋಗುವ ಸಮಯದಲ್ಲಿ ಅಮ್ಮ ಬೆಳಿಗ್ಗೆ ೫ ಗಂಟೆಗೆ ಎಬ್ಬಿಸುತ್ತಿದ್ದರು. ನಾನು ಓದಲು ಕುಳಿತು
ಹಾಗೆ ತೂಕಡಿಸುತ್ತಿದ್ದೆ. ಎಷ್ಟೋ ದಿನ ಅಮ್ಮ ಬೆಳಿಗ್ಗೆ ನನ್ನ ಎಬ್ಬಿಸಿ, ನೀರು ಕಾಯಿಸಲು ಬೆಂಕಿ ಹೊತ್ತಿಸಿ, ನನ್ನೊಂದಿಗೆ ಕೂತು ಓದಿಸುತ್ತಿದ್ದರು.
ಶಾಲೆಯಲ್ಲಿ ಎಲ್ಲರ ಜೊತೆ ಹೇಗಿರಬೇಕು, ಸಮಾಜದಲ್ಲಿ ನಡುವಳಿಕೆ ಹೇಗಿರಬೇಕು ಅನ್ನುವದನ್ನು ಕಲಿಸಿದ ಗುರು ನನ್ನ ಅಮ್ಮ.
ಅಂದು ನಾನು ರಾಂಕ್ ಬಂದಾಗ ತಾವೇ ರಾಂಕ್ ಬಂದಂತೆ ಖುಷಿಪತ್ತಿದ್ದ ಅಮ್ಮ, ನಾನು ಬಿದ್ದಾಗ, ನನಗೆ ನೋವಾದಾಗ, ಅವರೂ ಅತ್ತಿದ್ದರು.
ಇಂದು ನಾನು ದೊಡ್ಡವನಾದರೂ ನಮ್ಮ ಅಮ್ಮ ಹಾಗೆ ಇದ್ದಾರೆ. ಅವರಿಗೆ ನಾನು ಚಿಕ್ಕ ಮಗುವೆ. ಈಗಲೂ ನನಗೆ ಹುಷಾರು ತಪ್ಪಿದರೆ,
ರಾತ್ರಿ ಎಲ್ಲ ಎದ್ದಿದ್ದು ಆರೈಕೆ ಮಾಡುತ್ತಾರೆ. ನನಗೆ ಒಳ್ಳೆದಾಗಲಿ ಎಂದು ಎಷ್ಟೋ ದೇವರಿಗೆ ಹರಕೆ ಹೊತ್ತುಕೊಳ್ಳುತ್ತಾರೆ.
ನಾನು ಬೇಡ ಎಂದರೂ ಪ್ರತೀದಿನ ನನಗೆ ಕರವಸ್ತ್ರ, ಅಂಗಿ ಪ್ಯಾಂಟ್ ತನಕ ರೆಡಿ ಇಟ್ಟಿರುತ್ತಾರೆ.
ದಿನಾಲು ನಾನು ಹೊರಟಾಗ ನಿದಾನವಾಗಿ ಹುಷಾರಾಗಿ ಹೋಗು ಎಂದು ರಸ್ತೆಯ ತನಕ ಬಂದು ಕಳುಹಿಸಿಕೊಡುತ್ತಾರೆ.
ಇಂದಿಗೂ ನಾನು ಏನಾದರು ಆಟ ಆಡಿ ಬಂದರೆ, ಹೊರಗೆ ತಿರುಗಿ ಬಂದರೆ: ನಾನು ಮಲಗಿದ ನಂತರ ನನಗೆ ಗೊತ್ತಿಲ್ಲದಂತೆ
ನನ್ನ ಕಾಲಿಗೆ ಎಣ್ಣೆ ಸವ್ರುತ್ತಾರೆ.
ಹೇಗೆ ಅಮ್ಮ ಅಷ್ಟೊಂದು ದೊಡ್ಡ ಮತ್ತು ಮೃದು ಹೃದಯಿ ಎಂದು ಇಂದಿನ ತನಕ ನನಗೆ ತಿಳಿಯಲು ಸಾಧ್ಯವಾಗಿಲ್ಲ.
ನನಗೆ ಅಮ್ಮ ಅದು ಮಾಡಿದ್ದೇನೆ ತಿನ್ನು ಇದು ಮಾಡಿದ್ದೇನೆ ತಿನ್ನು ಅಂದಾಗ ಎಷ್ಟೋ ಸಲ ನಾನು ರೆಗಿದ್ದೇನೆ. ಆದರೆ ನನ್ನ ಅಮ್ಮ ಸಿಟ್ಟಗಿದ್ದನ್ನು ನೋಡಿಯೇ ಇಲ್ಲ.
ನಾನು ಎಲ್ಲಾದರೂ ಕಾರ್ಯ ಕ್ಕೆ ಹೋಗಿಬಂದರೆ, ಅಮ್ಮ, ನಿನಗೆ ದೃಷ್ಟಿ ಆಗಿದೆನೋಡು ಅಂತ ದೃಷ್ಟಿ ತೆಗೆಯುವದು ಗ್ಯಾರಂಟೀ.
ಪ್ರತೀದಿನ ನಾನು ಕೆಲಸಕ್ಕೆ ಹೊರಟಾಗ ದೇವರ ಮುಂದೆ ದೀಪ ರೆಡಿ ಇಟ್ಟಿದ್ದೇನೆ ಬೆಳಗಿಸಿ ಹೋಗು ಅನ್ನದಿದ್ದರೆ ಅವರಿಗೆ ಸಮಾದಾನವೇ ಇಲ್ಲ.
ಹೀಗೆ ಹೇಳುತ್ತಾ ಹೋದರೆ ಕೊನೆಯಿಲ್ಲದಷ್ಟು ಮಮತೆ ಪ್ರೀತಿಯನ್ನು ನೀಡುತ್ತಿದ್ದಾರೆ ಅಮ್ಮ.
ನಾನೆಷ್ಟೇ ದೊಡ್ಡವನಾದರೂ, ನಿನ್ನ ಕೈ ತುತ್ತಿನಲ್ಲಿರುವ ರುಚಿ, ನಿನ್ನ ತೊಡೆಯಲ್ಲಿ ಮಲಗಿದಾಗ ಸಿಗುವ ನಾನು ಭದ್ರ ಎಂಬ ಭಾವನೆ,
ನೀನು ನೆರೆದಿರುವ ನನ್ನ ತಲೆ ಗೆ ಪ್ರೀತಿಯಿಂದ ಹಾಕುವ ಎಣ್ಣೆ, ಬಳಲಿ ಬಂದಿರುವಾಗ ನೀನು ಕೇಳದೆಯೇ ತಂದು ಕೊಡುವ ಮಜ್ಜಿಗೆ,
ನಿನ್ನ ಅರೋಗ್ಯ ಸರಿ ಇಲ್ಲದಿದ್ದರೂ ನೀನು ಒತ್ತಾಯದಿಂದ ಮಾಡಿ ಬಡಿಸುವ ನನ್ನಿಷ್ಟದ ಅಡುಗೆ, ನಾನು ಹೊಸ ಬಟ್ಟೆ ತೊಟ್ಟಾಗ ನಿನ್ನ ಕಣ್ಣು ತೋರುವ ಸಂಭ್ರಮ,,,, ಅಮ್ಮಾ ಇದೆಲ್ಲದರ ಋಣ ತೀರಿಸಲು ಈ ಜನ್ಮ ಸಾಲದು ಅಮ್ಮಾ.
ಅದಕ್ಕೆ ತಾನೇ ದೊಡ್ಡವರು ಹೇಳಿರುವದು ತಾಯಿಯ ಪ್ರೀತಿಯ ಮುಂದೆ ಹಿಮಾಲಯವೂ ಹಿಂದೆ ಅಂತ.
ನನ್ನಿಂದ ಇಷ್ಟನ್ನೇ ಹೇಳಲು ಸಾಧ್ಯ, ಅಮ್ಮಾ ಇ ಲವ್ ಯು.

Thursday, July 15, 2010
ಒಂದು ಮಾತನು ಕೇಳಿ!
ಓ ನನ್ನ ಗೆಳೆತಿಯರೇ ನೀವ್ ,
ಅವ ಮುಟ್ಟಿದ; ಇವ ತಟ್ಟಿದ,
ಕಟ್ಟಿರಿ ಬಟ್ಟೆಯನು,
ಒಟ್ಟೂ ದೇಹವ ಆವರಿಸಲು.
ದೇಹ ತೋರಿಕೆಯಿಂದ ಏನು ಸಿಗುವದು ಹೇಳಿ?
ಮಿಂಚಿ ಹೋಗುವ ಮುನ್ನ ಒಂದು ಮಾತನು ಕೇಳಿ.
ತಪ್ಪು ತಿಳಿಯದಿರಿ ನಮ್ಮ,
ನಿಮ್ಮ ಒಳಿತು ರಕ್ಷಣೆಗೆ ಒತ್ತಿ ಹೇಳುತಿರುವದು
ನಾವ್ ಮುಚ್ಚಿಕೊಳ್ಳಿ ನಿಮ್ಮ ಮೈ
ದುಷ್ಟರ ಕೈ ತಾಕುವ ಮುನ್ನ !!!
ತದನಂತರ ಹೇಳುವ ಬದಲು, ಅವ ಮುಟ್ಟಿದ; ಇವ ತಟ್ಟಿದ,
ಕಟ್ಟಿರಿ ಬಟ್ಟೆಯನು,
ಒಟ್ಟೂ ದೇಹವ ಆವರಿಸಲು.
ದೇಹ ತೋರಿಕೆಯಿಂದ ಏನು ಸಿಗುವದು ಹೇಳಿ?
ಮಿಂಚಿ ಹೋಗುವ ಮುನ್ನ ಒಂದು ಮಾತನು ಕೇಳಿ.
ಅಪ್ಪಯ್ಯಾ
ಅಪ್ಪಯ್ಯ, ನಿನ್ನ ನೆನಪು ಕಾಡದೆ ಇರದು
ಮಕ್ಕಳನ್ನು ಬೆಳೆಸುವಲ್ಲಿ ಅಪ್ಪನ ಪಾತ್ರ ತುಂಬಾ ದೊಡ್ಡದು. ಅದರಲ್ಲೂ ಅವಿಭಕ್ತ ಕುಟುಂಬದಲ್ಲಿ ಹತ್ತಾರು ಮಕ್ಕಳನ್ನು ಬೆಳೆಸುವದು, ಓದಿಸುವದು ಎಂದರೆ ಕಥಿಣವೇ ಸರಿ.
ನನ್ನ ನೆನಪಿನ ಬುಟ್ಟಿಯಲ್ಲಿ ಅಳಿಯದೆ ಉಳಿದ ಅಪ್ಪಯ್ಯನ ಚಿತ್ರಪಟವನ್ನು ಬಿಚ್ಚುವ ಪ್ರಯತ್ನ ಇದು.
ನಾನು ಸುಮಾರು ೪-೫ ವರ್ಷದವನಿದ್ದಾಗ ಒಂದು ದಿನ ಯಾರೋ ಅತಿಥಿ ನಮ್ಮ ಮನೆಗೆ ಬಂದಿದ್ದರು. ಅವರಿಗೆಂದು ಇಟ್ಟಿದ್ದ ತಿಂಡಿಯನ್ನು ನಾನು ತೆಗೆದು ಕೊಂದು ಓಡಿದಾಗ
ಅಪ್ಪಯ್ಯ ಕೊಟ್ಟ ಏಟು ಇನ್ನು ನೆನಪಿದೆ. ಏಟಿನ ಜೊತೆ ಮನೆಗೆ ಬಂದ ಅತಿಥಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಪಾಠವೂ ಮರೆಯದೆ ಉಳಿದಿದೆ. ಇದೆ ರೀತಿಯ ಹತ್ತು ಹಲವು ಸಂಸ್ಕಾರಗಳನ್ನು
ಕಲಿಸಿದ, ಅದನ್ನು ಪಾಲಿಸುವಂತೆ ಪ್ರೇರೇಪಿಸಿದ ಅಪ್ಪಯ್ಯನ ಕಲಾತ್ಮಕತೆಗೆ ಅವರೇ ಸಾಟಿ.
ನಾನು ೫ನೆ ತರಗತಿಯಲ್ಲಿರುವಾಗಿನ ಒಂದು ದಿನ: ನನಗೆ ಪವರ್ ಕ್ರಿಕೆಟ್ ಬ್ಯಾಟ್ ಬೇಕೆಂದು ಕೇಳಿದೆ. ಅದರ ಬೆಲೆ ೧೯೯೩ರಲ್ಲೆ ೮೦೦roo ಇತ್ತು.
ಕೂಡು ಕುಟುಂಬದಲ್ಲಿ ಅಷ್ಟು ದುಬಾರಿ ವಸ್ತುವನ್ನು ಕೇವಲ ಆಟಕ್ಕಾಗಿ ತರುವದು ಇರಿಸುಮುರುಸು ತರುವ ಸಂಗತಿ ಆಗಿತ್ತು.
ಆದರೂ ಕೂಡ ಅವರು ಎರಡನೇ ವಿಚಾರ ಮಾಡದೆ ಅದೇ ದಿನ ನನ್ನ ನೆಚ್ಚಿನ ಬಟನ್ನು ತಂದು ಕೊಟ್ಟಿದ್ದು ಇನ್ನು ಮಾಸದೆ ಕಣ್ಣಿನ ಮುಂದೆ ಇದೆ.
ನಂತರ ಅದೇ ಬ್ಯಾಟ್ ನಿಂದ ಹಲವಾರು ಟೂರ್ನಿ ಗಳನ್ನೂ ಆಡಿ ಗೆದ್ದು ಬಂದ ಟ್ರೋಫಿ ಗಳನ್ನೂ ನೋಡಿ ಅವರು ಖುಷಿ ಪಟ್ಟಿದ್ದು ಹೆಮ್ಮೆಯ ಸಂಗತಿ.
ನಾನು ೬ನೆ ವರ್ಗದಲ್ಲಿದ್ದಾಗ ಒಂದು ದಿನ: ನಮ್ಮ ಮನೆಯ ಎಮ್ಮೆಗೆ ಕಾಯಿಲೆ ಬಂದಿತ್ತು. ತತ್ಕ್ಷಣ ಜಾನುವಾರು ವೈದ್ಯರನ್ನು ಕರೆತರಬೇಕು. ಜೀಪ್ ಓಡಿಸಲು ಅಣ್ಣ ಮನೆಯಲ್ಲಿರಲಿಲ್ಲ.
ಆಗ ಅಪ್ಪಯ್ಯ ನನ್ನನ್ನು ಕರೆದು, ನೀನು ಜೀಪ್ ಓಡಿಸು ನಾನು ಹೇಳಿಕೊಡುತ್ತೇನೆ ಎಂದು ಕಳಿಸಿ ಕರೆದೊಯ್ದರು. ನಾನು ವಾಹನ ಓಡಿಸಿದ ಪ್ರಥಮ ದಿನವೇ 5km ದೂರದ ಹಾರ್ಸಿಕತ್ತ ತನಕ
ಅಪ್ಪಯ್ಯನ ಮಾರ್ಗದರ್ಶನದಲ್ಲಿ ಜೀಪ್ ಓಡಿಸಿದೆ. ಸ್ವತಹ ಅವರು ಓಡಿಸದಿದ್ದರೂ, ಎಲ್ಲವನ್ನು ಬಲ್ಲವರಾಗಿದ್ದ ಅವರು ನನ್ನ ಬೆನ್ನು ತಟ್ಟಿದ ರೀತಿ ಯಾರು ಮೆಚ್ಚುವಂತದ್ದು.
ನಮ್ಮ ಯಾವುದೇ ಸಂಭಂದಿಕರ ಮನೆಯಲ್ಲಿ ವಿಶೇಷ ಕಾರ್ಯಕ್ರಮವಿದ್ದರೂ ಅಪ್ಪಯ್ಯ ಅಲ್ಲಿರಲೇ ಬೇಕು. ಅಲ್ಲಿಯನ್ ಆಗು ಹೋಗುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದ
ಅವರ ನಾಯಕತ್ವದ ಗುಣಕ್ಕೆ ಮಾರುಹೋಗದವರಿಲ್ಲ. ಅವರು ನಮ್ಮನ್ನಗಲಿ ೪ ವರ್ಷ ಕಳೆದರೂ, ಇವತ್ತಿಗೂ ಸಹ ನಮ್ಮ ವಲಯದಲ್ಲಿ ಕಾರ್ಯ ಆದರೆ ಅವರನ್ನು ನೆನಪಿಸಿಕೊಳ್ಳುವದೇ ಅವರ ಜವಾಬ್ದಾರಿಯುತ ನಿರ್ವಹಣೆಗೆ ಸಾಕ್ಷಿ.
ಕೂದುಕುಟುಮ್ಬದ ವ್ಯವಹಾರಗಳನ್ನು ನೋಡಿಕೊಂಡು, ಒಟ್ಟೂ ೮ ಹೆಣ್ಣುಮಕ್ಕಳ ಮದುವೆ ಕಾರ್ಯ ಮಾಡಿ, ಬರೋಬರಿ ೧೨ ಎಕರೆ ತೋಟವನ್ನು ನೋಡಿಕೊಂಡು ಬಂದ ಅವರ ಚಾನಕ್ಷತೆಗೆ ಹಾಟ್ಸ್ ಓಫ್ಫ್.
ನಮ್ಮ ಊರಿನಲ್ಲಿ ಮೊದಲು ಇಂಗ್ಲಿಷ್ ಕಲಿತವರಾಗಿದ್ದ ಅಪ್ಪಯ್ಯ ನಿಗೆ ಊರವರೆಲ್ಲ ಪ್ರೀತಿಯಿಂದ ಪಿ ಎಂ ಹೆಗಡೆ ಎಂದೇ ಕರೆಯುತ್ತಿದ್ದರು. ಹಿಂದಿ ಕೊಂಕಣಿ ಸಹ ಬಲ್ಲವರಾಗಿದ್ದ ಅವರು ಒಬ್ಬ ಬಹು ಪ್ರತಿಭೆ ಉಳ್ಳ ಸಜ್ಜನರಾಗಿದ್ದರು.
ನನ್ನ ಅಜ್ಜ ದುಡ್ಡಿನ ತೊಂದರೆಯಿಂದ ಚಿಕ್ಕಪ್ಪರಿಬ್ಬರಿಗೆ ಓದನ್ನು ನಿಲ್ಲಿಸಲು ಹೇಳಿದಾಗ, ಅಪ್ಪಯ್ಯ ನೆ ಅಜ್ಜನಿಗೆ ತಿಳಿಹೇಳಿ, ಚಿಕ್ಕಪ್ಪನ್ದಿರಿಗೆ ಮುಂದೆ ಓಡಿಸಿದ್ದು ಈಗ ಹಳೆ ಕಥೆ.
ಈ ಇಬ್ಬರು ಚಿಕ್ಕಪ್ಪಂದಿರು ಇಂದು ಜನ ಹುಬ್ಬೇರಿಸುವಂತೆ ಬೆಳೆದಿದ್ದಾರೆ.
ಮನೆಯಲ್ಲಿ ಎಷ್ಟೇ ಸವಲತ್ತಿದ್ದರೂ ಸಾರ್ವಜನಿಕ ಸಾರಿಗೆಯನ್ನು ಬಹುತೇಕ ಬಳಸುತ್ತಿದ್ದ ಅವರ ಆದರ್ಶ ಎಂದಿಗೂ ಪಾಲನಾರ್ಹ.
ಮಳೆಗಾಲದಲ್ಲಿ ಅಪ್ಪಯ್ಯ ನೀನು ಹೊತ್ತು ತರುತ್ತಿದ್ದ ಕಳಲೆ ಹೊರೆ, ಮದುವೆ ಹಿಂದಿನ ದಿನ ನೀನು ಚಪ್ಪರ ಹಾಕಿಸುತ್ತಿದ್ದ ಆ ಪ್ಲಾನು, ರೀತಿ, ಯಾವುದೇ ಪಟ್ಟಿ ಇಲ್ಲದೆ ನೀನು ನೆನಪಿಟ್ಟು ತರುತ್ತಿದ್ದ ೩೦-೪೦ ಸಾವಿರ ಬಾಳುವ ಸಾಮಾನುಗಳು, ಮಕ್ಕಳಿಗೆ ಪ್ರೀತಿ, ಭಯ ಎರಡನ್ನು ಇಡುತ್ತಿದ್ದ ನಿನ್ನ ಕೈಚಳಕ, ಯಾವುದೇ ಸಭೆಯಲ್ಲಿ ನೀನು ಭಾಷಣ ಮಾಡುತ್ತಿದ್ದ ಪರಿ
ವ್ಯವಹಾರ ಮಾಡಿದ ಎಲ್ಲಕಡೆ ನೀನು ಗಳಿಸಿದ ಗೌರವ ಪ್ರೀತಿ, ಒಡಹುಟ್ಟಿದವರು ಕಷ್ಟದಲ್ಲಿದ್ದಾಗ ನೀನು ಸ್ಪಂದಿಸಿದ ನೀತಿ,,,,,, ಅಪ್ಪಯ್ಯಾ ನಿಂಗೆ ನೀನೆ ಸಾಟಿ. ನಿನ್ನ ಜಾಗವನ್ನು ತುಂಬಲು ಯಾರಿಂದಲೂ ಸಾದ್ಯವಿಲ್ಲ..... ಅಪ್ಪಯ್ಯ, ನಿನ್ನ ನೆನಪು ಕಾಡದೆ ಇರದು,,,,,:( :(
ನಿನ್ನದೇ ದಾರಿಯಲ್ಲಿ ಸಾಗುವ ಯತ್ನದಲ್ಲಿ,
ನಾವು.

Subscribe to:
Posts (Atom)