Friday, January 22, 2010

ನಾನು ಆಡಿದ ಚೊಚ್ಚಲ ವಾಲಿಬಾಲ್ ಟೂರ್ನಿ:)

ನಾನು ಆಡಿದ ಚೊಚ್ಚಲ ವಾಲಿಬಾಲ್ ಟೂರ್ನಿ...
ಈಗ ವೃತ್ತಿಯಲ್ಲಿ ಮೈಮರೆತಿರುವ ನಮಗೆ, ಹಿಂದಿನ ದಿನಗಳನ್ನು ಮೆಲುಕು ಹಾಕಿದಾಗ......................................
ನಾನು ೫ ನೇ ವರ್ಗ ಕಲಿಯುತ್ತಿರುವ ಸಮಯ, ನನ್ನ ಎಲ್ಲ ಮಿತ್ರರು ಕ್ರಿಕೆಟ್ ನಿಂದ ಆಕರ್ಷನೆಗೊಳಗಾಗಿ, ಆಡಿ ನೋಡಿ ಸಂಬ್ರಮಿಸುತ್ತಿದ್ದರು. ನಾನು ಸಹ ಎಲ್ಲರೊಂದಿಗೆ ಸೇರಿ ಆಡುತ್ತಿದ್ದರೂ, ಎಲ್ಲೋ ಮನದ ಮೂಲೆಯಲ್ಲಿ ವಾಲಿಬಾಲ್ ನತ್ತ ಒಲವು ಜಾಸ್ತಿ.
ಇದಕ್ಕೆ ನನ್ನ ಶೇಷನ್ನಯ್ಯ ಮತ್ತು ಊರಿನ ಯುವಕರು ಪ್ರತಿ ದಿನ ಸಂಜೆ ಶಾಲೆ ಮೈದಾನದಲ್ಲಿ ವಾಲಿಬಾಲ್ ಆಡಿತ್ತಿದ್ದುದು, ಅದನ್ನು ನೋಡಿ ನಾನು ನಲಿಯುತ್ತಿದ್ದುದು, ಈ ಕಾರಣಗಳಿರಬಹುದು. ನಾನು ಸಹ ಅವರೊಂದಿಗೆ ಸೇರಿ ವಾಲಿಬಾಲ್ ಆಡಲು ಪ್ರಾರಂಭಿಸಿದೆ.
ಮೊದಲು ತಮ್ಮ ನೀನು ಸರ್ವಿಸ್ ಮಾಡು ಹಿಂದೆ ನಿಂತು ಆಡು ಎಂದು ಅಣ್ಣಂದಿರು ಹೇಳಿದ ಮಾತನ್ನು ನಾನು ಪಾಲಿಸಿ ಹಿಂದೆ ನಿಂತು ದಿಫೆನ್ಸೆ ಮತ್ತು ಟಚ್ ಆಡುವದನ್ನು ಕಲಿತೆ.
ನಾನು ದಿನದ ಆಟದಲ್ಲಿರಬೇಕೆಂದರೆ ಎಲ್ಲ ಯುವಕರೊಂದಿಗೆ ಸ್ಪರ್ದಿಸಿ ನಿಲ್ಲುವದು ಅನಿವಾರ್ಯವಾಗಿತ್ತು. ಈ ಕಾರಣದಿಂದ ನಾನು ಬಹು ಬೇಗ ಆಟವನ್ನು ಕಲಿತೆ ಅನ್ನಿಸುತ್ತದೆ.
ಹೀಗೆ ದಿನಗಳು ಸಾಗಿರುವಾಗ ಒಂದು ದಿನ ಹತ್ತಿರದ ಬಾಳೂರಿನಲ್ಲಿ ವಾಲಿಬಾಲ್ ಟೂರ್ನಿ..
ನಾನು ೬ನೆ ವರ್ಗದಲ್ಲಿದ್ದೆ. ಜನವರಿ ತಿಂಗಳಿನಲ್ಲಿ ಒಂದು ಭಾನುವಾರ ಟೂರ್ನಿ ಇದ್ದು ನಮ್ಮ ಊರಿನ ತಂಡಕ್ಕೆ ಆಮಂತ್ರಣ ಬಂದಿತ್ತು. ಇದು ತಾಲೂಕ ಮಟ್ಟದ ಟೂರ್ನಿ. ನಾನು ನಮ್ಮ ತಂಡದ ಆಟವನ್ನು ನೋಡಲು ಪ್ರೋತ್ಸಾಹಿಸಲು ಶೇಷನ್ನಯ್ಯ ನೊಂದಿಗೆ ಜೀಪನ್ನೇರಿ ಹೊರಟೆ. ಆಟ ಪ್ರಾರಂಭ ಆದ ಸ್ವಲ್ಪ ಸಮಯದಲ್ಲಿ ನಮ್ಮ ತಂಡದ ದತ್ತಣ್ಣ ಕಾಲು ಉಳುಕಿಸಿ ಕೊಂಡ. ಈಗ ಒಬ್ಬ ಆಟಗಾರ ಇಲ್ಲದೆ ನಮ್ಮ ತಂದ ಹಿಂದೆ ಬರುವ ಸ್ಥಿತಿ. ಆಗ ಶೇಷನ್ನಯ್ಯ ಹೇಳಿದ ಮಾತು, "ಏಯ್ ಹೆದ್ರಡಿ ನಮ್ಮನೆ ತಮ್ಮ ಆಡ್ತಾ ಕರಿತಿ, ಏಯ್ ತಮ ಬಾರಾ ಆಡ" ಅಂದ. ನನಗೆ ಭಯ ಉತ್ಸಾಹ ಎರಡು ಉಂಟಾಗಿ ತುಮುಲ ಗೊಂಡೆ.

ಅಣ್ಣ ಇದ್ದಾನೆ ಎನ್ನೋ ಧೈರ್ಯದಿಂದ ಅಂಗನವನ್ನು ಪ್ರವೇಶಿಸಿದೆ. ಕುಮ್ಬಾರ್ಕುಳಿ ಎದುರಾಳಿ ತಂಡ.
ಅದು ತಾಲೂಕಿನ ಉತ್ತಮ ತಂಡಗಳಲ್ಲೊಂದು. ದತ್ತಣ್ಣ ನ ಜಾಗದಲ್ಲಿ ಹೊಕ್ಕಿದ ನಾನು ಬಿದ್ದು ಎದ್ದು ದಿಫೆನ್ಸೆ ಆಡಿದೆ. ನಮ್ಮ ತಂಡದ ಲಿಫ್ಟರ್ ಬಾಲಣ್ಣ ನನ್ನ ಮೇಲೆ ನಂಬಿಕೆ ಇತ್ತು ಹಲವಾರು ಪಾಸ್ ಹಾಕಿದ. ನಾನು ಅದನ್ನು ಹುಸಿ ಮಾಡದೆ ನೆಲಕ್ಕೆ ಅಪ್ಪಳಿಸಿದೆ. ದಿನ ದ ಕೊನೆಗೆ ನಮ್ಮ ಗಾಳಿಜಡ್ಡಿ ತಂಡ ವಿಜಯ ಮಾಲೆ ಧರಿಸಿತು. ನನ್ನ ಶೇಷನ್ನಯ್ಯ " ಗುಡ್ ಸ್ಮಾಶರ್" ಪ್ರಶಸ್ತಿ ಪಡೆದರೆ, ನನಗೆ "ಉದಯೋನ್ಮುಖ ಆಟಗಾರ" ಪ್ರಶಸ್ತಿ ದೊರೆಯಿತು.

ಅಂದಿನಿಂದ ಆರಂಭವಾದ ನನ್ನ ವಾಲಿಬಾಲ್ ಪಯಣ, ಉತ್ತಮವಾಗಿ ಸಾಗಿ ನಾನು ೨ ವರ್ಷ ಗಳ ಕಾಲ "ವಿಶ್ವೇಶ್ವರಯ್ಯ ವಿಶ್ವ ವಿದ್ಯಾನಿಲಯ ವನ್ನು ಪ್ರತಿನಿಧಿಸುವಂತೆ ಮಾಡಿತು. ರಾಜ್ಯ ಮಟ್ಟದ ವಾಲಿಬಾಲ್ ವಲಯ ದಲ್ಲಿ ನನಗೊಂದು ಐಡೆಂಟಿಟಿ ತಂದು ಕೊಟ್ಟಿತು. ಈಗ ವೃತ್ತಿಯಲ್ಲಿ ಮೈಮರೆತಿರುವ ನಮಗೆ, ಹಿಂದಿನ ದಿನಗಳನ್ನು ಮೆಲುಕು ಹಾಕಿದಾಗ, ನೆನಪಿಗೆ ಬರುವ ಇಂತಹ ಹತ್ತು ಹಲವು ಘಟನೆ ಗಳು ಪುಳಕವನ್ನುಂಟು ಮಾಡುತ್ತವೆ. ಕಾಲ ಚಕ್ರ ತಿರುಗಬಾರದಿತ್ತು ಎಂದೆನಿಸುತ್ತದೆ. ಆದರೆ ಅದು ನಮ್ಮ ನಿಯಂತ್ರಣದಲ್ಲಿಲ್ಲ. ಈಗ ಎಲ್ಲೋ ವರ್ಷಕ್ಕೊಂದೆರಡು ದಿನ ವಾಲಿಬಾಲ್ ಆಡಿ ಹಿಂದಿನ ನೆನಪಿನ ಸಿಹಿ ಸುಳಿಯಲ್ಲಿ ಸಿಲುಕುವದೆ ಹಿತಕರ.

ನನ್ನ ವಾಲಿಬಾಲ್ ಜೀವನದ ಸಂಬ್ರಮಕ್ಕೆ ಕಾರಣ ರಾದ ಶೇಷನ್ನಯ್ಯ, ದತ್ತಣ್ಣ ಹಾಗೂ ನಮ್ಮ ತಂಡದ ಎಲ್ಲರಿಗು ಧನ್ಯವಾದಗಳು.

2 comments:

  1. ಹಾಯ್ MP,
    ಅದ್ಭುತವಾಗಿತ್ತು.. ನೀವು ಕೇವಲ ವಾಲೀಬಾಲ್ ಅಲ್ಲದೇ ನಿಮ್ಮ ಬರವಣಿಗೆಯಲ್ಲೂ ಕೈಚಳಕವನ್ನು ತೋರಿದ್ದೀರಾ...!!! :-)
    ಧನ್ಯವಾದಗಳು

    ReplyDelete